Posts

ಶ್ವಾಸಕೋಶದ ಮಹತ್ವ ತಿಳಿಸಿಕೊಟ್ಟ ಕರೋನ

Image
. ಇಂದು ವಿಶ್ವ ಶ್ವಾಸಕೋಶ ದಿನ. ಮಾನವ ದೇಹದ 5 ಪ್ರಮುಖ ಅಂಗಾಂಗಗಳಲ್ಲಿ ಒಂದಾದ ಶ್ವಾಸಕೋಶ , ದೇಹದ ಸದೃಢ ಆರೋಗ್ಯ ಕಾಪಾಡುವಲ್ಲಿ ಪ್ರಧಾನವಾದ ಪಾತ್ರ ವಹಿಸುತ್ತದೆ. ಎದೆಯ ಭಾಗದಲ್ಲಿ ಹೃದಯದ ಅಕ್ಕ-ಪಕ್ಕ 2 ಶ್ವಾಸಕೋಶಗಳು ಕುಳಿತಿವೆ. ಇವುಗಳ ಪ್ರಮುಖ ಕೆಲಸ - ನಾವು ಸೇವಿಸುವ ಗಾಳಿಯಲ್ಲಿರುವ ಆಮ್ಲಜನಕವನ್ನು ರಕ್ತದ ಮೂಲಕ ದೇಹದ ಪ್ರತಿ ಜೀವಕೋಶಗಳಿಗೂ ಸರಬರಾಜು ಮಾಡುವುದು ಹಾಗೂ ಕೋಶಗಳಿಂದ ಬಿಡಲಾದ ಇಂಗಾಲದ ಡೈಯಾಕ್ಸೈಡ್ ಹೊರಹಾಕುವುದಾಗಿದೆ. ದೇಹದ ನೀರಿನ ಹಾಗೂ ಉಷ್ಣಾಂಶ ಸಮತೋಲನ, ಸೂಕ್ಷ್ಮ ಕ್ರಿಮಿಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಕಾಪಾಡುವಲ್ಲಿಯೂ ಸಹ ಶ್ವಾಸಕೋಶಗಳು ಮುಖ್ಯ ಪಾತ್ರ ವಹಿಸುತ್ತವೆ. ಶ್ವಾಸಕೋಶದ ತೊಂದರೆ ಹಾಗೂ ರೋಗಗಳು ಶತ ಶತಮಾನಗಳಿಂದಲೂ ಮಾನವನನ್ನು ಭಾದಿಸುತ್ತಾ ಬಂದಿದೆ. ವಿಶ್ವದಾದ್ಯಂತ ಸಂಭವಿಸುತ್ತಿರುವ ಸಾವುಗಳಿಗೆ ಕಾರಣಗಳನ್ನು ನೋಡಿದಾಗ, ಮೊದಲನೆಯ ಸ್ಥಾನ ಹೃದಯ ರೋಗಗಳು ಪಡೆದುಕೊಂಡರೆ , ಎರಡನೆಯ ಸ್ಥಾನ ಶ್ವಾಸಕೋಶದ ಕಾಯಿಲೆಗಳಾಗಿವೆ. ಉಲ್ಬಣ ಗೊಳ್ಳುತ್ತಿರುವ ವಾಯುಮಾಲಿನ್ಯ, ಹೆಚ್ಚುತ್ತಿರುವ ಧೂಮಪಾನ ಸೇವನೆ ಹಾಗೂ ಅನಾರೋಗ್ಯಕರ ಜೀವನ ಶೈಲಿಯಿಂದಾಗಿ ಕಳೆದ ದಶಕದಲ್ಲಿ ಶ್ವಾಸಕೋಶ ಕಾಯಿಲೆಗಳು ಗಣನೀಯವಾಗಿ ಏರಿಕೆಯಾಗಿದೆ. ಶ್ವಾಸಕೋಶ ವನ್ನು ಬಾಧಿಸುವ ಪ್ರಮುಖ ಕಾಯಿಲೆಗಳ ಬಗ್ಗೆ ತಿಳಿದುಕೊಳ್ಳೋಣ. ಅಸ್ತಮಾ , ದಮ್ಮು ಕಾಯಿಲೆ ( ಸಿ.ಓ.ಪಿ.ಡಿ ) , ಪಲ್ಮನರಿ ಫೈಬ್ರೋಸಿಸ್ , ಶ್ವಾಸಕೋಶದ ಕ್ಯಾನ್ಸರ್ - ಇವು ಹೇರಳವಾಗಿ...

ಧೂಮಪಾನ ತ್ಯಜಿಸಿ, ಶ್ವಾಸಕೋಶದ ಕ್ಯಾನ್ಸರ್ ದೂರವಿಡಿ. ✍️ ಡಾ.ಅಜಿತ್ ಈಟಿ , ಶ್ವಾಸಕೋಶ ತಜ್ಞರು.

Image
Aug 1st 2020  - ಇಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನ ‌. ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕ್ಯಾನ್ಸರ್ ರೋಗವು ಮಾರಣಾಂತಿಕ ವಾಗಿದ್ದು , ಜಗತ್ತಿನಾದ್ಯಂತ ಸಂಭವಿಸುವ ಸಾವುಗಳಿಗೆ ಪ್ರಮುಖ ಕಾರಣವಾಗಿದೆ . ಮಾನವ ದೇಹದಲ್ಲಿ  ಕಾಣಿಸಿಕೊಳ್ಳುವ ಕ್ಯಾನ್ಸರ್ ಗಳ ಪೈಕಿ ಶ್ವಾಸಕೋಶದ ಕ್ಯಾನ್ಸರ್ ಅಗ್ರಸ್ಥಾನ ಪಡೆದಿದ್ದು , ಕ್ಯಾನ್ಸರ್ ನಿಂದ ಆಗುವ ಸಾವುಗಳಿಗೂ ಮುಂಚೂಣಿಯಲ್ಲಿದೆ. ಜಗತ್ತಿನಾದ್ಯಂತ ಸಂಭವಿಸುವ ಪ್ರತಿ 5 ಕ್ಯಾನ್ಸರ್ ಸಾವುಗಳಲ್ಲಿ , 1 ಸಾವು ಶ್ವಾಸಕೋಶದ ಕ್ಯಾನ್ಸರ್ ನಿಂದ ಆಗಿರುತ್ತದೆ. WHO ಪ್ರಕಾರ  2018 ರಲ್ಲಿ  ಜಗತ್ತಿನಾದ್ಯಂತ 20.9 ಲಕ್ಷ ರೋಗಿಗಳು ಶ್ವಾಸಕೋಶದ ಕ್ಯಾನ್ಸರ್ ಭಾದಿತರಾಗಿದ್ದು, ಅವರಲ್ಲಿ 17.9 ಲಕ್ಷ ರೋಗಿಗಳು ಸಾವನ್ನಪ್ಪಿದ್ದಾರೆ. ಭಾರತವು ಸಹ ಅತಿ ಹೆಚ್ಚು ಶ್ವಾಸಕೋಶದ ಕ್ಯಾನ್ಸರ್ ಬಾಧಿತ ರಾಷ್ಟ್ರಗಳಲ್ಲಿ ಹೆಸರು ಪಡೆದುಕೊಂಡಿದೆ. ಕಾರಣಗಳೇನು ?? ಶ್ವಾಸಕೋಶದ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾಗಿದ್ದು , ಸಾಮಾನ್ಯವಾಗಿ 50 ವರ್ಷ ಹಾಗೂ ಮೇಲ್ಪಟ್ಟ ವಯೋಮಾನದ ಪುರುಷರಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಶೇಕಡಾ 85- 90 % ರಷ್ಟು ಶ್ವಾಸಕೋಶದ ಕ್ಯಾನ್ಸರ್ ಧೂಮಪಾನದಿಂದ ಕಾಣಿಸಿಕೊಳ್ಳುತ್ತದೆ. ಅನುವಂಶಿಯತೆ , ವಾಯುಮಾಲಿನ್ಯ , ವೃತ್ತಿ ಸಂಬಂಧದ ಮಾಲಿನ್ಯ ( ಸಿಲಿಕಾ, ಅಸ್ಬೇಷ್ಟೋಸ್,  ಆರ್ಸೆನಿಕ್, ಯುರೇನಿಯಂ ) , ಸಿ.ಒ.ಪಿ.ಡಿ ಕಾಯಿಲೆ , ಆಹಾರ ಪದ್ಧತಿ ಹ...

ವೈದ್ಯನ ವಾಸ್ತವಿಕ ಜೀವನದ ಒಂದು ಒಳನೋಟ !!

Image
ಲೇಖಕರು :  ಡಾ. ಅಜಿತ್ ಈಟಿ  ,  ಶ್ವಾಸಕೋಶ ತಜ್ಙರು,  ದಾವಣಗೆರೆ. ಇಂದು ರಾಷ್ಟ್ರೀಯ ವೈದ್ಯರ ದಿನ. ಭಾರತ ದೇಶ ಕಂಡ ಅಪ್ರತಿಮ ವೈದ್ಯರು ಹಾಗೂ 14 ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಭಾರತರತ್ನ ಪುರಸ್ಕೃತ ಡಾ. ಬಿಧಾನ್ ಚಂದ್ರ ರಾಯ್ ರವರ ಜನ್ಮ ಮತ್ತು ಮರಣ ದಿನ - ಜುಲೈ 1 ರಾಷ್ಟ್ರೀಯ ವೈದ್ಯರ ದಿನ ಎಂದು ಗುರುತಿಸಲಾಗಿದೆ. ಡಾ.ಬಿ.ಸಿ ರಾಯ್ ರವರು ದೇಶದ ವೈದ್ಯಕೀಯ ವ್ಯವಸ್ಥೆಗೆ ನೀಡಿರುವ ಅಪಾರ ಕೊಡುಗೆಗೆ ಗೌರವ ಸೂಚಿಸುವ ಜೊತೆಗೆ ಸಮಾಜದಲ್ಲಿ ವೈದ್ಯರ ಪಾತ್ರ ,ಶ್ರಮ ಹಾಗೂ ಮಹತ್ವ ವನ್ನು ಎತ್ತಿಹಿಡಿಯುವ ಉದ್ದೇಶ ಈ ದಿನಾಚರಣೆ ಹೊಂದಿದೆ.    ಪುರಾಣಗಳಲ್ಲಿ ವೈದ್ಯರ ಬಗ್ಗೆ ಉಲ್ಲೇಖವಾಗಿರುವ ಎರಡು ಶ್ಲೋಕಗಳು ಈ ಸಮಯದಲ್ಲಿ ನೆನಪಿಸಿಕೊಳ್ಳಬಹುದು.   " ಶರೀರೇ ಜರ್ಜರಿಭೂತೆ ವ್ಯಾಧಿಗ್ರಸ್ತೇ ಕಲೆಬರೆ , ಔಷಧಂ ಜಾಹ್ನವಿತೋಯಂ ವೈದ್ಯೋ ನಾರಾಯಣ ಹರಿ ". ಈ ಶ್ಲೋಕದ ಅರ್ಥ- ಮಾನವನ ದೇಹ ರೋಗಗ್ರಸ್ತ ಗೊಂಡಾಗ ಪವಿತ್ರ ಗಂಗಾ ನೀರಿ ನಂತಹ ಔಷಧಿ ನೀಡುವ ವೈದ್ಯನು ಭಗವಂತ ನಾರಾಯಣನಿಗೆ ಸಮಾನ ಎಂಬುದು. ಮಾನವ ತಾನು ಅನಾರೋಗ್ಯ ಹೊಂದಿದಾಗ ಮೊದಲು ಹುಡುಕಿಕೊಂಡು ಹೋಗುವುದೇ ವೈದ್ಯರನ್ನು . ಸಾವಿನ ಅಂಚಿನಲ್ಲಿರುವವರನ್ನು ಬದುಕಿಸಿ ಅವರ ಹಾಗೂ ಅವರ ಕುಟುಂಬಕ್ಕೆ ಪುನರ್ಜೀವ ನೀಡುವ ಮಹಾತ್ಮರೇ ವೈದ್ಯರು. ಕಡುಬಡವರಿಂದ ಹಿಡಿದು ಆಗರ್ಭ ಶ್ರೀಮಂತರಿಗೂ ಆರೋಗ್ಯವೇ ಪರಮ ಆಸ್ತಿ. ಇಂತಹ ಬೆಲೆಕಟ...

ಅಲರ್ಜಿ , ಅಸ್ತಮಾ , ಇನ್ಹೇಲರ್ ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ✍️ಡಾ.ಅಜಿತ್ ಈಟಿ

Image
✍️ಡಾ. ಅಜಿತ್ ಈಟಿ , ಶ್ವಾಸಕೋಶದ ತಜ್ಞರು, ದಾವಣಗೆರೆ May 5 2020 - “ವಿಶ್ವ ಅಸ್ತಮಾ ದಿನ”. ಸಾರ್ವಜನಿಕರಲ್ಲಿ ಅಸ್ತಮಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಹಿತದೃಷ್ಟಿಯಿಂದ, ಪ್ರತಿವರ್ಷ ಮೇ ತಿಂಗಳ ಮೊದಲನೇ ಮಂಗಳವಾರ "ವಿಶ್ವ ಆಸ್ತಮಾ ದಿನ" ವೆಂದು ಗುರುತಿಸಲಾಗುತ್ತದೆ. ಆಧುನಿಕ ಯುಗದ ಆಹಾರ ಪದ್ಧತಿ, ಜೀವನ ಶೈಲಿ ಹಾಗೂ ವಾಯುಮಾಲಿನ್ಯದಿಂದ, ಈ ತೊಂದರೆ ಹೇರಳವಾಗಿ ಕಾಣಿಸಿಕೊಳ್ಳುತ್ತಿದೆ. ಅಸ್ತಮಾ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿ, ಜನರು ಹೊಂದಿರುವ ಸಂದೇಹ ಹಾಗೂ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಸದುದ್ದೇಶ ಅಸ್ತಮಾ ದಿನಾಚರಣೆ ಹೊಂದಿದೆ. ಅಸ್ತಮಾ ಎಂದರೇನು ?? ಅಸ್ತಮಾ ಒಂದು ದೀರ್ಘಕಾಲಿಕ ಶ್ವಾಸಕೋಶದ ಅಸ್ವಸ್ಥತೆ. ಶ್ವಾಸನಾಳಗಳ ಒಳಭಾಗದಲ್ಲಿ ಕೆರಳಿಕೆ, ಉರಿಯೂತ (inflammation), ಕಫಾ ಕಾಣಿಸಿಕೊಂಡು ಶ್ವಾಸಸ್ನಾಯುಗಳು ಬಿಗಿಯುವುದರಿಂದ ಉಸಿರಾಟದ ಕೊಳವೆಗಳು ಚಿಕ್ಕದಾಗುತ್ತವೆ. ಇದರಿಂದ ಕೆಮ್ಮು, ಎದೆ ಬಿಗಿತ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಅಸ್ತಮಾಗೆ ಕಾರಣವೇನು ?? ಅಸ್ತಮಾ ತೊಂದರೆಗೆ ಬಹುಮುಖ್ಯ ಕಾರಣ ಅಲರ್ಜಿ. ಅಲರ್ಜಿ ಎಂದರೆ-ದೇಹ ಅವಶ್ಯಕ್ಕಿಂತ ಹೆಚ್ಚಾಗಿ ಸ್ಪಂದಿಸುವ ಪ್ರವೃತ್ತಿ(hyper-responsive). ಇದರಿಂದಾಗಿ, ಅವರು ಸೇವಿಸುವ ಅಥವಾ ಉಸಿರಾಡುವ ಗಾಳಿಯಲ್ಲಿ ಕೆಲವು ಕೆರಳಿಕೆ ಉಂಟುಮಾಡುವ ಪ್ರಚೋದಕಗಳ (ಉದಾ: ಧೂಳು, ಧೂಮಪಾನ, ಹೊಗೆ, ತಂಗಾಳಿ, ಸೋಂಕು, ಪರಾಗ, ಹಾಸಿಗೆಯ ಧೂಳುಕ...

ಕ್ಷಯರೋಗ ಬಗ್ಗೆ ಡಾ.ಅಜಿತ್ ಈಟಿ ರವರ ಸಂಪೂರ್ಣ ಮಾಹಿತಿ.

Image
✍️ಡಾ. ಅಜಿತ್ ಈಟಿ , ಶ್ವಾಸಕೋಶದ ತಜ್ಞರು, ದಾವಣಗೆರೆ March 24 - ಇಂದು "ವಿಶ್ವ ಕ್ಷಯರೋಗ ದಿನ" . ಮಾರ್ಚ್ 24 1882 ರಂದು ರಾಬರ್ಟ್ ಕಾಕ್ ಎಂಬ ವಿಜ್ಞಾನಿ ಕ್ಷಯರೋಗಕ್ಕೆ (Tuberculosis) ಕಾರಣವಾದ ಟಿ.ಬಿ ಸೂಕ್ಷ್ಮಾಣು ವನ್ನು ಕಂಡುಹಿಡಿದ ದಿನ . "ಮೃತ್ಯುವಿನ ನಾಯಕ"( Captain of death) ಎಂದೇ ಹೆಸರು ಪಡೆದಿರುವ ಈ ರೋಗದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಸೂಕ್ತ ದಿನವಿದು. ಸಾವಿರಾರು ವರ್ಷಗಳ ಇತಿಹಾಸ ಪಡೆದಿರುವ ಕ್ಷಯರೋಗ ( ಟಿ.ಬಿ) , ಇಂದಿನ ಆಧುನಿಕ ಮಾನವ ಕುಲಕ್ಕೂ ಸಹ ಒಂದು ದೊಡ್ಡ ಕಂಟಕವಾಗಿ ಉಳಿದುಕೊಂಡಿದೆ. ಅದರಲ್ಲೂ ಪ್ರಮುಖವಾಗಿ ಭಾರತ ದೇಶ ಕ್ಷಯರೋಗದಿಂದ ಬಾಧಿತವಾದ ರಾಷ್ಟ್ರಗಳಲ್ಲಿ ಅಗ್ರಸ್ಥಾನ ಪಡೆದಿದೆ. ಆದರೆ ಇತ್ತೀಚೆಗೆ ಕರೋನ ವೈರಸ್ ಕಲಿಸಿಕೊಟ್ಟ ಪಾಠದಿಂದ ದೇಶದಲ್ಲಿರುವ ಕ್ಷಯರೋಗದ ಹಾಗೂ ಅನೇಕ ಸಾಂಕ್ರಾಮಿಕ ರೋಗಗಳ ಹೊರೆಯನ್ನ ಸಮರ್ಪಕವಾಗಿ ಕಡಿಮೆಗೊಳಿಸಲು ಅವಕಾಶವಿದೆ. ವಿಶ್ವದ ಶೇಕಡ 25% ರಷ್ಟು ಕ್ಷಯರೋಗಿಗಳನ್ನು ಭಾರತ ಹೊಂದಿದೆ.  ಅಂಕಿ ಅಂಶಗಳನ್ನು ಗಮನಿಸಿದರೆ ಪ್ರತಿವರ್ಷ ನಮ್ಮ ದೇಶದಲ್ಲಿ ಲಕ್ಷಾಂತರ ಜನರು ಕ್ಷಯರೋಗದಿಂದ  ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ.  2018 ರಲ್ಲಿ  ಭಾರತದ 26.9 ಲಕ್ಷ  ಜನರು ಟಿ.ಬಿ ಪೀಡಿತರಾದರೆ , ಅದರಲ್ಲಿ 4.40 ಲಕ್ಷ  ಜನರು ಅಸುನೀಗಿದ್ದಾರೆ . ಏಡ್ಸ್ (HIV) ಹಾಗು  ಔಷಧ ನಿರೋಧಕ ಟಿ.ಬಿ (MDR - TB) ಯಿಂದ , ಈ ಸ...

ಧೂಮಪಾನ- ಶ್ವಾಸಕೋಶದ ದೊಡ್ಡ ವೈರಿ!

Image
ಮಾರ್ಚ್ 11 2020 - ಇಂದು ಅಂತರಾಷ್ಟ್ರೀಯ "ನೋ ಸ್ಮೋಕಿಂಗ್ ಡೇ". ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು "ನೋ ಸ್ಮೋಕಿಂಗ್ ಡೇ" ದಿನವನ್ನು ಆಚರಿಸಲಾಗುತ್ತದೆ. "ಧೂಮಪಾನ ಆರೋಗ್ಯಕ್ಕೆ ಹಾನಿಕರ",   "ಧೂಮಪಾನದಿಂದ ಸಾವು ಸಂಭವಿಸುತ್ತದೆ" ಎಂಬ ವಾಕ್ಯಗಳು ನಮಗೇನು ಹೊಸದಲ್ಲ.  ಎಲ್ಲಂದರಲ್ಲಿ ಈ ಘೋಷಣೆಗಳನ್ನ ನಾವು ನೋಡುತ್ತೇವೆ , ಮೇಲಾಗಿ ಇದು ನಮಗೆ ತಿಳಿದಿರುವ ವಿಷಯ. ಆದರೂ  ಭಾರತದಲ್ಲಿ  ಧೂಮಪಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. W.H.O ಪ್ರಕಾರ ವಿಶ್ವದ 12%  ರ ಷ್ಟು ಧೂಮಪಾನಿಗಳು ಭಾರತದವರು. ಭಾರತದಲ್ಲಿ 1998 ರಿಂದ 2015 ರವರೆಗೆ ಧೂಮಪಾನಿಗಳ ಸಂಖ್ಯೆ  ಗಣನೀಯವಾಗಿ ಹೆಚ್ಚಳವಾಗಿದೆ ( ಶೇಖಡ 36 ರಷ್ಟು). ಧೂಮಪಾನಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣಗಳು: -- ಆಧುನಿಕತೆಯ ನೆಪದಲ್ಲಿ ಧೂಮಪಾನವನ್ನು ಭಾರತೀಯರು ಒಪ್ಪಿಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಕೃತಿಯನ್ನು ಮರೆತು  ಪಾಶ್ಚಾತ್ಯ ಲೋಕದ ಕಡೆ ( westernization) ಆಕರ್ಷಿತರಾಗುತ್ತಿದ್ದಾರೆ. -- ಜೀವನದ ನಾನಾ ಹಂತದಲ್ಲಿ ನಮಗೆದುರಾಗುವ ಸಾಮಾಜಿಕ ಹಾಗೂ ವೈಯಕ್ತಿಕ ಒತ್ತಡಗಳಿಂದ ಪಾರಾಗಲು ಧೂಮಪಾನದ ವ್ಯಸನಿಗಳಾಗುತ್ತಿದ್ದಾರೆ . -- ಯುವಕರಲ್ಲಿ ಧೂಮಪಾನ ಗಣನೀಯವಾಗಿ ಹೆಚ್ಚಾಗುತ್ತಿದೆ. ದೂರದರ್ಶನ ಹಾಗೂ ಸಿನಿಮಾ ಗಳಿಂದಾಗುವ ಆಕರ್ಷಣೆ , ಸ್ನೇಹಿತರ ಒತ್ತಾಯ , ಪರೀಕ್ಷೆ ಹಾಗೂ ವೈಯಕ್ತಿಕ ಒತ್ತಡಗಳ ಹೆಸರಿನಲ್ಲ...

ಗೊರಕೆ ನಿರ್ಲಕ್ಷಿಸಿದರೆ ಅಪಾಯ !

Image
ನಮ್ಮಲ್ಲಿ ಹೆಚ್ಚು ಜನರಿಗೆ ನಿದ್ರಿಸುವಾಗ ಗೊರಕೆ ಕಾಣಿಸಿಕೊಳ್ಳುತ್ತದೆ. ಗೊರಕೆ ಕೇವಲ ನಿದ್ರಿಸುವಾಗ ಬರುವ ಘೋರ ಶಬ್ಧ ಅಷ್ಟೆ ಅಲ್ಲ , ಅದು ಒಂದು ಉಸಿರಾಟ ಸಂಬಂಧ ತೊಂದರೆಯ ಸೂಚನೆ. ಗೊರಕೆ ಅಲ್ಪ ಪ್ರಮಾಣದಲ್ಲಿದ್ದರೆ ಯಾವ ಭಯ ಪಡುವ ಅಗತ್ಯವಿಲ್ಲ. ಆದರೆ ಅತಿಯಾದ ಪ್ರಮಾಣದಲ್ಲಿ ಬರುವ ಗೊರಕೆ ಅಪಾಯ ತರುವಂತಥದ್ದು. ಅದು "Obstructive sleep apnea" - O.S.A ತೊಂದರೆಯಾಗಿರಬಹುದು. "O.S.A" ತೊಂದರೆಯ ಲಕ್ಷಣಗಳು: -- ಹೆಚ್ಚು ಪ್ರಮಾಣದ ಗೊರಕೆ - ಅಂದರೆ , ಪಕ್ಕದ ಕೋಣೆಗೆ ಕೇಳಿಸುವಂತಹ ಗೊರಕೆ. -- ಗೊರಕೆ ಹೊಡೆಯುವ ವ್ಯಕ್ತಿ , ನಿದ್ರೆಯಿಂದ ಪದೇ ಪದೇ ಉಸಿರು ಕಟ್ಟಿ ಎಚ್ಚರಗೊಳ್ಳುವುದು ಅಥವಾ ಒದ್ದಾಡುವುದು. ಇದು ಅವರಿಗೆ ಅರಿವಾಗದಿದ್ದರೂ , ಅವರ ಪಕ್ಕದಲ್ಲಿ ಮಲಗಿರುವವರಿಗೆ ತಿಳಿದಿರುತ್ತದೆ. -- ಬೆಳಗ್ಗೆ ನಿದ್ರೆಯಿಂದ ಎದ್ದ ನಂತರ  ನಿದ್ರೆ ಅಸಂಪೂರ್ಣ ಎನ್ನಿಸುವ ಭಾವನೆ , ಗಂಟಲು ಒಣಗುವುದು , ತಲೆ ನೋವು ಕಾಣಿಸಿಕೊಳ್ಳುವುದು. -- ಕೆಲಸದ ಸಮಯದಲ್ಲಿ ತಲೆನೋವು ,ಏಕಾಗ್ರತೆ ಇಲ್ಲದಿರುವುದು, ಅತಿಯಾದ ಸುಸ್ತು , ಕೆಲಸದಲ್ಲಿ ಆಸಕ್ತಿ ಕ್ಷೀಣಿಸುವುದು. -- ಹಗಲಿನಲ್ಲಿ ಕೂತು ಕೂತಲ್ಲೆ ಗೊತ್ತಿಲ್ಲದಂತೆ ನಿದ್ರೆಗೆ ಜಾರುವುದು. ( ಉದಾ: ಟಿ.ವಿ ವೀಕ್ಷಿಸುವಾಗ )   "O.S.A" ತೊಂದರೆ ಯಾರಲ್ಲಿ ಕಂಡುಬರುತ್ತದೆ. -- ಅತಿ ಹೆಚ್ಚು ತೂಕ ಹೊಂದಿದವರಲ್ಲಿ ಅಥವಾ ಬೊಜ್ಜು ಮೈ ಹೊಂದಿದವರಲ್ಲಿ "O.S.A...