Posts

Showing posts with the label doctor's day

ವೈದ್ಯನ ವಾಸ್ತವಿಕ ಜೀವನದ ಒಂದು ಒಳನೋಟ !!

Image
ಲೇಖಕರು :  ಡಾ. ಅಜಿತ್ ಈಟಿ  ,  ಶ್ವಾಸಕೋಶ ತಜ್ಙರು,  ದಾವಣಗೆರೆ. ಇಂದು ರಾಷ್ಟ್ರೀಯ ವೈದ್ಯರ ದಿನ. ಭಾರತ ದೇಶ ಕಂಡ ಅಪ್ರತಿಮ ವೈದ್ಯರು ಹಾಗೂ 14 ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಭಾರತರತ್ನ ಪುರಸ್ಕೃತ ಡಾ. ಬಿಧಾನ್ ಚಂದ್ರ ರಾಯ್ ರವರ ಜನ್ಮ ಮತ್ತು ಮರಣ ದಿನ - ಜುಲೈ 1 ರಾಷ್ಟ್ರೀಯ ವೈದ್ಯರ ದಿನ ಎಂದು ಗುರುತಿಸಲಾಗಿದೆ. ಡಾ.ಬಿ.ಸಿ ರಾಯ್ ರವರು ದೇಶದ ವೈದ್ಯಕೀಯ ವ್ಯವಸ್ಥೆಗೆ ನೀಡಿರುವ ಅಪಾರ ಕೊಡುಗೆಗೆ ಗೌರವ ಸೂಚಿಸುವ ಜೊತೆಗೆ ಸಮಾಜದಲ್ಲಿ ವೈದ್ಯರ ಪಾತ್ರ ,ಶ್ರಮ ಹಾಗೂ ಮಹತ್ವ ವನ್ನು ಎತ್ತಿಹಿಡಿಯುವ ಉದ್ದೇಶ ಈ ದಿನಾಚರಣೆ ಹೊಂದಿದೆ.    ಪುರಾಣಗಳಲ್ಲಿ ವೈದ್ಯರ ಬಗ್ಗೆ ಉಲ್ಲೇಖವಾಗಿರುವ ಎರಡು ಶ್ಲೋಕಗಳು ಈ ಸಮಯದಲ್ಲಿ ನೆನಪಿಸಿಕೊಳ್ಳಬಹುದು.   " ಶರೀರೇ ಜರ್ಜರಿಭೂತೆ ವ್ಯಾಧಿಗ್ರಸ್ತೇ ಕಲೆಬರೆ , ಔಷಧಂ ಜಾಹ್ನವಿತೋಯಂ ವೈದ್ಯೋ ನಾರಾಯಣ ಹರಿ ". ಈ ಶ್ಲೋಕದ ಅರ್ಥ- ಮಾನವನ ದೇಹ ರೋಗಗ್ರಸ್ತ ಗೊಂಡಾಗ ಪವಿತ್ರ ಗಂಗಾ ನೀರಿ ನಂತಹ ಔಷಧಿ ನೀಡುವ ವೈದ್ಯನು ಭಗವಂತ ನಾರಾಯಣನಿಗೆ ಸಮಾನ ಎಂಬುದು. ಮಾನವ ತಾನು ಅನಾರೋಗ್ಯ ಹೊಂದಿದಾಗ ಮೊದಲು ಹುಡುಕಿಕೊಂಡು ಹೋಗುವುದೇ ವೈದ್ಯರನ್ನು . ಸಾವಿನ ಅಂಚಿನಲ್ಲಿರುವವರನ್ನು ಬದುಕಿಸಿ ಅವರ ಹಾಗೂ ಅವರ ಕುಟುಂಬಕ್ಕೆ ಪುನರ್ಜೀವ ನೀಡುವ ಮಹಾತ್ಮರೇ ವೈದ್ಯರು. ಕಡುಬಡವರಿಂದ ಹಿಡಿದು ಆಗರ್ಭ ಶ್ರೀಮಂತರಿಗೂ ಆರೋಗ್ಯವೇ ಪರಮ ಆಸ್ತಿ. ಇಂತಹ ಬೆಲೆಕಟ...