ಧೂಮಪಾನ- ಶ್ವಾಸಕೋಶದ ದೊಡ್ಡ ವೈರಿ!
ಮಾರ್ಚ್ 11 2020 - ಇಂದು ಅಂತರಾಷ್ಟ್ರೀಯ "ನೋ ಸ್ಮೋಕಿಂಗ್ ಡೇ". ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು "ನೋ ಸ್ಮೋಕಿಂಗ್ ಡೇ" ದಿನವನ್ನು ಆಚರಿಸಲಾಗುತ್ತದೆ. "ಧೂಮಪಾನ ಆರೋಗ್ಯಕ್ಕೆ ಹಾನಿಕರ", "ಧೂಮಪಾನದಿಂದ ಸಾವು ಸಂಭವಿಸುತ್ತದೆ" ಎಂಬ ವಾಕ್ಯಗಳು ನಮಗೇನು ಹೊಸದಲ್ಲ. ಎಲ್ಲಂದರಲ್ಲಿ ಈ ಘೋಷಣೆಗಳನ್ನ ನಾವು ನೋಡುತ್ತೇವೆ , ಮೇಲಾಗಿ ಇದು ನಮಗೆ ತಿಳಿದಿರುವ ವಿಷಯ. ಆದರೂ ಭಾರತದಲ್ಲಿ ಧೂಮಪಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. W.H.O ಪ್ರಕಾರ ವಿಶ್ವದ 12% ರ ಷ್ಟು ಧೂಮಪಾನಿಗಳು ಭಾರತದವರು. ಭಾರತದಲ್ಲಿ 1998 ರಿಂದ 2015 ರವರೆಗೆ ಧೂಮಪಾನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ( ಶೇಖಡ 36 ರಷ್ಟು). ಧೂಮಪಾನಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣಗಳು: -- ಆಧುನಿಕತೆಯ ನೆಪದಲ್ಲಿ ಧೂಮಪಾನವನ್ನು ಭಾರತೀಯರು ಒಪ್ಪಿಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಲೋಕದ ಕಡೆ ( westernization) ಆಕರ್ಷಿತರಾಗುತ್ತಿದ್ದಾರೆ. -- ಜೀವನದ ನಾನಾ ಹಂತದಲ್ಲಿ ನಮಗೆದುರಾಗುವ ಸಾಮಾಜಿಕ ಹಾಗೂ ವೈಯಕ್ತಿಕ ಒತ್ತಡಗಳಿಂದ ಪಾರಾಗಲು ಧೂಮಪಾನದ ವ್ಯಸನಿಗಳಾಗುತ್ತಿದ್ದಾರೆ . -- ಯುವಕರಲ್ಲಿ ಧೂಮಪಾನ ಗಣನೀಯವಾಗಿ ಹೆಚ್ಚಾಗುತ್ತಿದೆ. ದೂರದರ್ಶನ ಹಾಗೂ ಸಿನಿಮಾ ಗಳಿಂದಾಗುವ ಆಕರ್ಷಣೆ , ಸ್ನೇಹಿತರ ಒತ್ತಾಯ , ಪರೀಕ್ಷೆ ಹಾಗೂ ವೈಯಕ್ತಿಕ ಒತ್ತಡಗಳ ಹೆಸರಿನಲ್ಲ...