ಗೊರಕೆ ನಿರ್ಲಕ್ಷಿಸಿದರೆ ಅಪಾಯ !
ನಮ್ಮಲ್ಲಿ ಹೆಚ್ಚು ಜನರಿಗೆ ನಿದ್ರಿಸುವಾಗ ಗೊರಕೆ ಕಾಣಿಸಿಕೊಳ್ಳುತ್ತದೆ. ಗೊರಕೆ ಕೇವಲ ನಿದ್ರಿಸುವಾಗ ಬರುವ ಘೋರ ಶಬ್ಧ ಅಷ್ಟೆ ಅಲ್ಲ , ಅದು ಒಂದು ಉಸಿರಾಟ ಸಂಬಂಧ ತೊಂದರೆಯ ಸೂಚನೆ. ಗೊರಕೆ ಅಲ್ಪ ಪ್ರಮಾಣದಲ್ಲಿದ್ದರೆ ಯಾವ ಭಯ ಪಡುವ ಅಗತ್ಯವಿಲ್ಲ. ಆದರೆ ಅತಿಯಾದ ಪ್ರಮಾಣದಲ್ಲಿ ಬರುವ ಗೊರಕೆ ಅಪಾಯ ತರುವಂತಥದ್ದು. ಅದು "Obstructive sleep apnea" - O.S.A ತೊಂದರೆಯಾಗಿರಬಹುದು. "O.S.A" ತೊಂದರೆಯ ಲಕ್ಷಣಗಳು: -- ಹೆಚ್ಚು ಪ್ರಮಾಣದ ಗೊರಕೆ - ಅಂದರೆ , ಪಕ್ಕದ ಕೋಣೆಗೆ ಕೇಳಿಸುವಂತಹ ಗೊರಕೆ. -- ಗೊರಕೆ ಹೊಡೆಯುವ ವ್ಯಕ್ತಿ , ನಿದ್ರೆಯಿಂದ ಪದೇ ಪದೇ ಉಸಿರು ಕಟ್ಟಿ ಎಚ್ಚರಗೊಳ್ಳುವುದು ಅಥವಾ ಒದ್ದಾಡುವುದು. ಇದು ಅವರಿಗೆ ಅರಿವಾಗದಿದ್ದರೂ , ಅವರ ಪಕ್ಕದಲ್ಲಿ ಮಲಗಿರುವವರಿಗೆ ತಿಳಿದಿರುತ್ತದೆ. -- ಬೆಳಗ್ಗೆ ನಿದ್ರೆಯಿಂದ ಎದ್ದ ನಂತರ ನಿದ್ರೆ ಅಸಂಪೂರ್ಣ ಎನ್ನಿಸುವ ಭಾವನೆ , ಗಂಟಲು ಒಣಗುವುದು , ತಲೆ ನೋವು ಕಾಣಿಸಿಕೊಳ್ಳುವುದು. -- ಕೆಲಸದ ಸಮಯದಲ್ಲಿ ತಲೆನೋವು ,ಏಕಾಗ್ರತೆ ಇಲ್ಲದಿರುವುದು, ಅತಿಯಾದ ಸುಸ್ತು , ಕೆಲಸದಲ್ಲಿ ಆಸಕ್ತಿ ಕ್ಷೀಣಿಸುವುದು. -- ಹಗಲಿನಲ್ಲಿ ಕೂತು ಕೂತಲ್ಲೆ ಗೊತ್ತಿಲ್ಲದಂತೆ ನಿದ್ರೆಗೆ ಜಾರುವುದು. ( ಉದಾ: ಟಿ.ವಿ ವೀಕ್ಷಿಸುವಾಗ ) "O.S.A" ತೊಂದರೆ ಯಾರಲ್ಲಿ ಕಂಡುಬರುತ್ತದೆ. -- ಅತಿ ಹೆಚ್ಚು ತೂಕ ಹೊಂದಿದವರಲ್ಲಿ ಅಥವಾ ಬೊಜ್ಜು ಮೈ ಹೊಂದಿದವರಲ್ಲಿ "O.S.A...