ಗೊರಕೆ ನಿರ್ಲಕ್ಷಿಸಿದರೆ ಅಪಾಯ !
"O.S.A" ತೊಂದರೆಯ ಲಕ್ಷಣಗಳು:
-- ಹೆಚ್ಚು ಪ್ರಮಾಣದ ಗೊರಕೆ - ಅಂದರೆ , ಪಕ್ಕದ ಕೋಣೆಗೆ ಕೇಳಿಸುವಂತಹ ಗೊರಕೆ.
-- ಗೊರಕೆ ಹೊಡೆಯುವ ವ್ಯಕ್ತಿ , ನಿದ್ರೆಯಿಂದ ಪದೇ ಪದೇ ಉಸಿರು ಕಟ್ಟಿ ಎಚ್ಚರಗೊಳ್ಳುವುದು ಅಥವಾ ಒದ್ದಾಡುವುದು. ಇದು ಅವರಿಗೆ ಅರಿವಾಗದಿದ್ದರೂ , ಅವರ ಪಕ್ಕದಲ್ಲಿ ಮಲಗಿರುವವರಿಗೆ ತಿಳಿದಿರುತ್ತದೆ.
-- ಬೆಳಗ್ಗೆ ನಿದ್ರೆಯಿಂದ ಎದ್ದ ನಂತರ ನಿದ್ರೆ ಅಸಂಪೂರ್ಣ ಎನ್ನಿಸುವ ಭಾವನೆ , ಗಂಟಲು ಒಣಗುವುದು , ತಲೆ ನೋವು ಕಾಣಿಸಿಕೊಳ್ಳುವುದು.
-- ಕೆಲಸದ ಸಮಯದಲ್ಲಿ ತಲೆನೋವು ,ಏಕಾಗ್ರತೆ ಇಲ್ಲದಿರುವುದು, ಅತಿಯಾದ ಸುಸ್ತು , ಕೆಲಸದಲ್ಲಿ ಆಸಕ್ತಿ ಕ್ಷೀಣಿಸುವುದು.
-- ಹಗಲಿನಲ್ಲಿ ಕೂತು ಕೂತಲ್ಲೆ ಗೊತ್ತಿಲ್ಲದಂತೆ ನಿದ್ರೆಗೆ ಜಾರುವುದು. ( ಉದಾ: ಟಿ.ವಿ ವೀಕ್ಷಿಸುವಾಗ )
"O.S.A" ತೊಂದರೆ ಯಾರಲ್ಲಿ ಕಂಡುಬರುತ್ತದೆ.
-- ಅತಿ ಹೆಚ್ಚು ತೂಕ ಹೊಂದಿದವರಲ್ಲಿ ಅಥವಾ ಬೊಜ್ಜು ಮೈ ಹೊಂದಿದವರಲ್ಲಿ "O.S.A"ತೊಂದರೆ ಕಂಡು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ .
-- ದಪ್ಪ ಕುತ್ತಿಗೆ ಹೊಂದಿದವರಲ್ಲಿ ಹಾಗು ಕುತ್ತಿಗೆಯ ಉದ್ದಳತೆ ಚಿಕ್ಕದಾಗಿರುವವರಲ್ಲಿ ಕಂಡುಬರುತ್ತದೆ.
-- ಕೆಲವು ವ್ಯಕ್ಕಿಗಳಲ್ಲಿ ಹುಟ್ಟಿನಿಂದ ಬಂದ ಅಥವಾ ಬೆಳವಣಿಗೆಯ ಲೋಪದಿಂದ ಕುತ್ತಿಗೆಯ ಶ್ವಾಸನಾಳ ಚಿಕ್ಕದಾಗಿದ್ದರೆ ಈ ತೊಂದರೆ ಕಾಣಿಸಿಕೊಳ್ಳುತ್ತದೆ ( ಉದಾ: ದೊಡ್ಡ ನಾಲಿಗೆ , ಸಣ್ಣದವಡೆ)
-- ಥೈರಾಯ್ಡ್ ಸಮಸ್ಯೆ ( hypothyroidism) , ಸಕ್ಕರೆ ಖಾಯಿಲೆ ಇರುವುವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಈ ಮೇಲ್ಕಂಡಂತೆ ವಿವರಿಸಿದ ವ್ಯಕ್ಕಿಗಳಲ್ಲಿ , ನಿದ್ರಿಸುವಾಗ ಕುತ್ತಿಗೆಯ ಶ್ವಾಸನಾಳ ಹೆಚ್ಚು ಕುಸಿಯುವ ಪ್ರವೃತ್ತಿ ಹೊಂದಿರುತ್ತದೆ. ಹಾಗಾಗಿ ಚಿಕ್ಕದಾದ ಶ್ವಾಸನಾಳದಿಂದ ಉಸಿರಾಡುವಾಗ ಗೊರಕೆಯ ಶಬ್ದ ಬರುತ್ತದೆ. ಕೆಲ ನಿಮಿಷಗಳು ಕಳೆದಂತೆ , ಗಾಢ ನಿದ್ರೆಗೆ ಹೋಗುವ ಸಂದರ್ಭದಲ್ಲಿ ಶ್ವಾಸನಾಳ ಸಂಪೂರ್ಣವಾಗಿ ಮುಚ್ಚುವುದರಿಂದ ಉಸಿರಾಟ ನಿಂತು ಹೋಗುತ್ತದೆ (apnea) . ಉಸಿರಾಟ ನಿಂತು ದೇಹಕ್ಕೆ ಆಮ್ಲಜನಕದ ಕೊರತೆಯಾದಾಗ ಮೆದುಳು ಎಚ್ಚೆತ್ತುಕೊಂದು ನಿದ್ರೆಯಿಂದ ವ್ಯಕ್ತಿಯನ್ನು ಎಚ್ಚರ ಮಾಡುತ್ತದೆ. ಇದೇ ತರಹ ಅಂದಾಜು ಪ್ರತಿ 15-20 ನಿಮಿಷಕ್ಕೂ ಉಸಿರಾಟ ನಿಂತು ಹೋಗಿ ಎಚ್ಚರ ಉಂಟಾಗುತ್ತಿರುತ್ತದೆ. ಈ ಪ್ರಕ್ರಯೆಯಿಂದ "O.S.A" ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿ ಗಾಢ ನಿದ್ರೆಗೆ ಹೋಗುವುದಿಲ್ಲ. ಆದ ಕಾರಣ ನಿದ್ರಾಹೀನತೆಯಿಂದ ಬಳಲುತ್ತಾರೆ. ಹಲವು ತಿಂಗಳು/ವರ್ಷಗಳಿಂದ ನಡೆತ್ತಿರುವ ಈ ಪ್ರಕ್ರಯೆಯಿಂದ ದೇಹದ ಎಲ್ಲಾ ಪ್ರಮುಖ ಅಂಗಗಳ ಮೇಲೆ ದುಷ್ಪರಿಣಾಮಗಳು ಬೀರುತ್ತದೆ.
"O.S.A" ತೊಂದರೆಯ ದುಷ್ಪರಿಣಾಮಗಳು:
-- ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿ ಲವಲವಕೆಯಿಂದ ಇರುವುದಿಲ್ಲ. ಬೇಗನೆ ನಿಶ್ಯಕ್ತಿ , ಏಕಾಗ್ರತೆ ಕೊರತೆ , ತಲೆ ನೋವು , ವಿದ್ಯಾಭ್ಯಾಸ ಹಾಗು ಕೆಲಸದ ಸಾಮರ್ಥ್ಯ ಕ್ಷೀಣಿಸುತ್ತದೆ.
-- ದೀರ್ಘಕಾಲದ ನಿದ್ರಾಹೀನತೆಯಿಂದ -" Oxidative stress" ಎಂಬ ಪ್ರಕ್ರಿಯೆ ಉಂಟಾಗಿ - ಸಕ್ಕರೆ ಖಾಯಿಲೆ , ಬಿ.ಪಿ ಖಾಯಿಲೆ , ಹಾರ್ಟ್ ಫ್ಯೇಲೂರ್ ( ಹೃದಯಾಘಾತ ), ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು , ಮೆದುಳು ಸ್ಟ್ರೋಕ್ , ಕಿಡ್ನಿ ತೊಂದರೆ ಹಾಗು ಡಿಪ್ರೆಶನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
-- ಈಗಾಗಲೆ ಸಕ್ಕರೆ ಖಾಯಿಲೆ , ಬಿ.ಪಿ ಖಾಯಿಲೆ , ಹೃದಯದ ತೊಂದರೆ , ಥೈರಾಯ್ಡ್ , ಅಸ್ತಮಾ ಸಮಸ್ಯೆ ಇಂದ ಬಳಲುತಿದ್ದರೆ - O.S.A ತೊಂದರೆಗೆ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ , ಈ ಎಲ್ಲಾ ತೊಂದರೆಗಳಲ್ಲಿ ಚೇತರಿಕೆ ಕಂಡುಬರುವುದಿಲ್ಲ.
-- ಎಷ್ಟೇ ಪ್ರಯತ್ನ ಪಟ್ಟರೂ ತೂಕ ಕಡಿಮೆಯಾಗುವುದಿಲ್ಲ.
-- ಗೊರಕೆಯ ಘೋರ ಶಬ್ದದಿಂದ , ಪಕ್ಕದಲ್ಲಿ ಮಲಗಿರುವವರಿಗೆ ಹಾಗು ಮನೆಯವರಿಗೆ ತೊಂದರೆಯಾಗುತ್ತದೆ. ಇದು ಒಂದು ಮುಜುಗರದ ಸಂಗತಿಯೂ ಹೌದು.
"Sleep study"ಪರೀಕ್ಷೆ ಎಂದರೇನು ??
"O.S.A" ತೊಂದರೆಯನ್ನು ಖಚಿತ ಪಡಿಸಲು "ಸ್ಲೀಪ್ ಸ್ಟಡಿ" ಎಂಬ ಪರೀಕ್ಷೆ ಮಾಡಲಾಗುತ್ತದೆ . ಇದು ಪ್ರಮುಖವಾಗಿ ನಿದ್ರಿಸುವಾಗ ಸಂಭವಿಸುವ ತೊಂದರೆಯಾಗಿರುವುದರಿಂದ, ಈ ಪರೀಕ್ಷೆಯನ್ನು ರಾತ್ರಿ ನಿದ್ರಿಸುವಾಗ "Sleep lab" ನಲ್ಲಿ ನಡೆಸಲಾಗುತ್ತದೆ. ಸುಮಾರು 6 - 7 ಘಂಟೆಗಳ ಕಾಲ ಪರೀಕ್ಷೆ ನಡೆಯಲಿದ್ದು , ಆ ವ್ಯಕ್ತಿಯ ಗೊರಕೆ ಪ್ರಮಾಣ ಎಷ್ಟಿದೆ , ಗೊರಕೆಯಿಂದ ಆಮ್ಲಜನಕ ಎಷ್ಟು ಕಡಿಮೆಯಾಗುತ್ತಿದೆ , ಎಷ್ಟು ಬಾರಿ ಉಸಿರಾಟ ನಿಂತು ಹೋಗಿ (apnea , hypopnea) ಎಚ್ಚರವಾಗ್ತರೆ , ಗೊರಕೆಯಿಂದ ಮೆದುಳು , ಹೃದಯ , ಬಿ.ಪಿ ಹಾಗು ಶ್ವಾಸಕೋಶದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತದೆ. Sleep study ಪರೀಕ್ಷೆ ನೋವುರಹಿತವಾಗಿರುತ್ತದೆ.
ಪರಿಹಾರೋಪಾಯಗಳು :
-- "O.S.A" ತೊಂದರೆಗೆ ' CPAP Therapy' ಎಂಬ ಮಾದರಿಯ ಚಿಕಿತ್ಸಾ ವಿಧಾನ ಪರಿಣಾಮಕಾರಿಯಾಗಿದ್ದು, ಉಸಿರಾಟ ನಿಂತು ಹೋಗುವ (apnea, hypopnea) ಪ್ರಕ್ರಿಯೆ ಕಡಿಮೆಯಾಗುತ್ತದೆ.
-- 'CPAP Therapy' - ಅಂದರೆ , ನಿದ್ರಿಸುವಾಗ ಮೂಗು/ಬಾಯಿಯ ಹೊರಭಾಗದಿಂದ ಒಂದು ಮಾಸ್ಕ್ ಮೂಲಕ CPAP ಯಂತ್ರದಿಂದ ಗಾಳಿ ಒದಗಿಸಲಾಗುವುದು.ಈ ಚಿಕಿತ್ಸೆ ಹಲವಾರು ಸಂಶೋಧನೆಗಳ ಪ್ರಕಾರ O.S.A ತೊಂದರೆಗೆ ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ CPAP ಯಾವ ಪ್ರಮಾಣದಲ್ಲಿ ಉಪಯೋಗಿಸಬೇಕೆಂಬ ಮಾಹಿತಿ Sleep study ಪರೀಕ್ಷೆಯಲ್ಲಿ ತಿಳಿಯುತ್ತದೆ.
-- ಕೆಲವರಲ್ಲಿ ಮಾತ್ರ ಆಪರೇಷನ್ ಹಾಗು ಬೇರೆ ವಿಧಾನದ ಚಿಕಿತ್ಸೆ ಬೇಕಾಗಬಹುದು.
-- ಇದರ ಜೊತೆಗೆ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು. ದಿನನಿತ್ಯ ವ್ಯಾಯಾಮ ಹಾಗು ಮಿತ ಆಹಾರ ಸೇವನೆಯಿಂದ ಕುತ್ತುಗೆಯ ಸುತ್ತ ಇರುವ ಬೊಜ್ಜನ್ನು ಕಡಿಮೆಗೊಳಿಸಿಕೊಳ್ಳಬೇಕು.
-- ಮಲಗುವಾಗ ಬೆನ್ನಿನ ಮೇಲೆ ಮಲಗಬಾರದು , ಎಡಕ್ಕೆ ಅಥವಾ ಬಲಕ್ಕೆ ತಿರುಗಿ ಮಲಗಬೇಕು.
-- ಧೂಮಪಾನ , ಮದ್ಯಪಾನ ತ್ಯಜಿಸಬೇಕು .ಮದ್ಯಪಾನ ಸೇವನೆಯಿಂದ ಗೊರಕೆ ಹೆಚ್ಚಾಗುತ್ತದೆ.
ಸಮೀಕ್ಷೆಗಳ ಪ್ರಕಾರ ಭಾರತದಲ್ಲಿ ಶೇಖಡ 20 - 30 % ಭಾಗದ ಜನರಲ್ಲಿ ಗೊರಕೆ ಕಾಣಿಸಿಕೊಳ್ಳುತ್ತದೆ. ನಮ್ಮ ಜನರಲ್ಲಿ "O.S.A" ತೊಂದರೆ ಬಗ್ಗೆ ಅರಿವು ತುಂಬಾನೆ ಕಡಿಮೆ ಇದ್ದು , ಗೊರಕೆಯನ್ನು ನಿರ್ಲಕ್ಷಿಸುವವರು ಹೆಚ್ಚು. ಮೊದಲೇ ಹೇಳಿದ ಹಾಗೆ ಗೊರಕೆ ಅಲ್ಪ ಪ್ರಮಾಣದಲ್ಲಿದ್ದರೆ ಯಾವ ಭಯ ಪಡುವ ಅಗತ್ಯವಿಲ್ಲ. ಆದರೆ ಗೊರಕೆಯ ಜೊತೆ "O.S.A" ತೊಂದರೆಯ ಲಕ್ಷಣಗಳು ಕಂಡುಬಂದರೆ ವ್ಯೆದ್ಯರನ್ನು ಕಂಡು "Sleep study" ಮಾಡಿಸಿ , ಅವಶ್ಯವಿದ್ದರೆ ಬೇಗನೆ ಸರಿಯಾದ ಚಿಕಿತ್ಸೆ ಪಡೆದರೆ ಆರೋಗ್ಯಕರ ನಿದ್ರೆ ಪಡೆಯಬಹುದು ಹಾಗು "O.S.A" ತೊಂದರೆಯಿಂದಾಗುವ ದುಷ್ಪರಿಣಾಮಗಳನ್ನ ತಪ್ಪಿಸಬಹುದು.

Very nice message sir.
ReplyDelete