ಧೂಮಪಾನ- ಶ್ವಾಸಕೋಶದ ದೊಡ್ಡ ವೈರಿ!


ಮಾರ್ಚ್ 11 2020 - ಇಂದು ಅಂತರಾಷ್ಟ್ರೀಯ "ನೋ ಸ್ಮೋಕಿಂಗ್ ಡೇ". ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು "ನೋ ಸ್ಮೋಕಿಂಗ್ ಡೇ" ದಿನವನ್ನು ಆಚರಿಸಲಾಗುತ್ತದೆ.

"ಧೂಮಪಾನ ಆರೋಗ್ಯಕ್ಕೆ ಹಾನಿಕರ",   "ಧೂಮಪಾನದಿಂದ ಸಾವು ಸಂಭವಿಸುತ್ತದೆ" ಎಂಬ ವಾಕ್ಯಗಳು ನಮಗೇನು ಹೊಸದಲ್ಲ.  ಎಲ್ಲಂದರಲ್ಲಿ ಈ ಘೋಷಣೆಗಳನ್ನ ನಾವು ನೋಡುತ್ತೇವೆ , ಮೇಲಾಗಿ ಇದು ನಮಗೆ ತಿಳಿದಿರುವ ವಿಷಯ. ಆದರೂ 
ಭಾರತದಲ್ಲಿ ಧೂಮಪಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

W.H.O ಪ್ರಕಾರ ವಿಶ್ವದ 12% 
ಷ್ಟು ಧೂಮಪಾನಿಗಳು ಭಾರತದವರು. ಭಾರತದಲ್ಲಿ 1998 ರಿಂದ 2015 ರವರೆಗೆ ಧೂಮಪಾನಿಗಳ ಸಂಖ್ಯೆ  ಗಣನೀಯವಾಗಿ ಹೆಚ್ಚಳವಾಗಿದೆ ( ಶೇಖಡ 36 ರಷ್ಟು).


ಧೂಮಪಾನಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣಗಳು:

-- ಆಧುನಿಕತೆಯ ನೆಪದಲ್ಲಿ ಧೂಮಪಾನವನ್ನು ಭಾರತೀಯರು ಒಪ್ಪಿಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಕೃತಿಯನ್ನು ಮರೆತು  ಪಾಶ್ಚಾತ್ಯ ಲೋಕದ ಕಡೆ ( westernization) ಆಕರ್ಷಿತರಾಗುತ್ತಿದ್ದಾರೆ.

-- ಜೀವನದ ನಾನಾ ಹಂತದಲ್ಲಿ ನಮಗೆದುರಾಗುವ ಸಾಮಾಜಿಕ ಹಾಗೂ ವೈಯಕ್ತಿಕ ಒತ್ತಡಗಳಿಂದ ಪಾರಾಗಲು ಧೂಮಪಾನದ ವ್ಯಸನಿಗಳಾಗುತ್ತಿದ್ದಾರೆ .

-- ಯುವಕರಲ್ಲಿ ಧೂಮಪಾನ ಗಣನೀಯವಾಗಿ ಹೆಚ್ಚಾಗುತ್ತಿದೆ. ದೂರದರ್ಶನ ಹಾಗೂ ಸಿನಿಮಾ ಗಳಿಂದಾಗುವ ಆಕರ್ಷಣೆ , ಸ್ನೇಹಿತರ ಒತ್ತಾಯ , ಪರೀಕ್ಷೆ ಹಾಗೂ ವೈಯಕ್ತಿಕ ಒತ್ತಡಗಳ ಹೆಸರಿನಲ್ಲಿ ಯುವಕರು ಧೂಮಪಾನದ ಮೊರೆಹೋಗಿದ್ದಾರೆ. ದುಖಃದ ವಿಷಯವೆಂದರೆ ಧೂಮಪಾನ ಭಾರತದ ಯುವತಿಯರಲ್ಲೂ ಹೆಚ್ಚಾಗುತ್ತಿದೆ.

-- ಇನ್ನೊಂದು ಕಡೆ,  ಅನರಕ್ಷತೆ ಹಾಗೂ ನಿರುದ್ಯೋಗದಿಂದಾಗಿ ಹಳ್ಳಿಗಳಲ್ಲಿ ಬೀಡಿ ಹಾಗೂ ಸಿಗರೇಟು ಸೇದುವು
 ಸಂಖ್ಯೆ ಏರಿಕೆಯಾಗಿದೆ.

                                    


ಧೂಮಪಾನ - ಶ್ವಾಸಕೋಶದ ದೊಡ್ಡ ವೈರಿ.

-- ಧೂಮಪಾನ ದೇಹದ ಎಲ್ಲಾ ಪ್ರಮುಖಾಂಗಳಾದ - ಹೃದಯ, ರಕ್ತನಾಳ , ಮೆದುಳು , ಕಿಡ್ನಿ ಗಳ  ಜೊತೆಗೆ ಶ್ವಾಸಕೋಶದ ಮೇಲೆ ನೇರವಾದ ಪ್ರಭಾವವನ್ನು ಬೀರುತ್ತದೆ. ಧೂಮಪಾನಿಗಳಲ್ಲಿ ಶ್ವಾಸಕೋಶದ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.


-- ಇದು ತಿಳಿದಿರುವ ವಿಷಯವೇ. ಆದರೆ ಹಲವರು ಹೇಳುವುದೇನೆಂದರೆ - "ಎಷ್ಟೋ ಧೂಮಪಾನಿಗಳು ಆರೋಗ್ಯವಾಗಿದ್ದಾರೆ. ನಾನು ಧೂಮಪಾನ ಮಾಡುತ್ತಿದ್ದೇನೆ ಆದರೆ ನನಗೆ ಯಾವುದೇ ತೊಂದರೆಗಳಿಲ್ಲ" ವೆಂಬ ವಾದವನ್ನ ಮುಂದಿಡುತ್ತಾರೆ. ಇದು ಕೇವಲ ಮೂರ್ಖತನ.

-- ಧೂಮಪಾನ ತಕ್ಷಣ 
ಕೆಲ ನಿಮಿಷಗಳಿಗೆ ನಿಮಗೆ ಸುಖ ಹಾಗೂ ನೆಮ್ಮದಿಯನ್ನು ನೀಡಬಹುದು ಆದರೆ ವರ್ಷಗಳು ಕಳೆದಂತೆ , ನಿಮ್ಮ ಶ್ವಾಸಕೋಶವನ್ನು ಅನಾರೋಗ್ಯದ ಕಡೆಗೆ ದೂಡುತ್ತದೆ. ಗಟ್ಟಿ ವಯಸ್ಸಿನಲ್ಲಿ ಯಾವುದೇ ತೊಂದರೆಗಳು ಕಾಣದೇ ಇರಬಹುದು, ಆದರೆ 40/50 ವಯಸ್ಸು ದಾಟಿದ ನಂತರ ಧೂಮಪಾನದ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಲು ಪ್ರಾರಂಭವಗುತ್ತದೆ.  ವೈರಸ್ ಹಾಗೂ ಬ್ಯಾಕ್ಟೀರಿಯಾದ ಸೋಂಕುಗಳನ್ನು ತಡೆಗಟ್ಟುವ ಶಕ್ತಿ ಕ್ಷೀಣಿಸುತ್ತದೆ.

-- ಶ್ವಾಸಕೋಶದ ತೊಂದರೆಗಳಾದ - ಅಸ್ತಮಾ , ಕ್ಷಯರೋಗ , ಕ್ಯಾನ್ಸರ್ , ನಿಮೋನಿಯಾ ಹಾಗೂ ದೀರ್ಘಕಾಲದ ಶ್ವಾಸಕೋಶ ರೋಗಗಳು -  ದಮ್ಮು ರೋಗ ( COPD-  Chronic Obstructive pulmonary diseases ) , ಐ.ಎಲ್.ಡಿ ( interstial lung diseases) ಧೂಮಪಾನಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈಗ ಮಾಡುವ ತಪ್ಪಿಗೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.







ಧೂಮಪಾನವನ್ನು ಇಂದೇ ತ್ಯಜಿಸಿ

-- ಧೂಮಪಾನದಿಂದ ನಿಮಗಷ್ಟೇ ಅಲ್ಲ , ನಿಮ್ಮ ಪ್ರೀತಿಪಾತ್ರರಿಗೂ ಹಾನಿಕಾರಕ . ಧೂಮಪಾನಿಗಳು ಹೊರಬಿಡುವ ಹೊಗೆ ಯಿಂದ ( second hand smoking) ಹಾಗೂ ಧೂಮಪಾನದ ಹೊಗೆಯ ಸೂಕ್ಷ್ಮ ಹಾನಿಕಾರಕ ಪದಾರ್ಥಗಳು ಬಟ್ಟೆ ಹಾಗೂ ವಸ್ತುಗಳ ಮೇಲೆ ಬಿದ್ದಾಗ ( third hand smoking) , ನಿಮ್ಮ ಮಕ್ಕಳ ಹಾಗೂ ಪ್ರೀತಿಪಾತ್ರರ ಅನಾರೋಗ್ಯಕ್ಕೂ ನೀವು ಕಾರಣರಾಗುತ್ತೀರ.

-- ಧೂಮಪಾನವನ್ನು ಯಾವುದೇ ವಯಸ್ಸಿನಲ್ಲಿ ತ್ಯಜಿಸಿದರೂ ಕೂಡ ಅದರ ಪ್ರಯೋಜನಗಳಿವೆ.  ಈ ಹಂತದಲ್ಲಿ ನೀವು ಧೂಮಪಾನವನ್ನು ತ್ಯಜಿಸಿದರೂ, ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಮುಂದೆ ಆಗುವ ಮಾರಣಾಂತಿಕ ರೋಗಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.





ಕೆಲವು ಸಲಹೆಗಳು:

-- ಧೂಮಪಾನ ತ್ಯಜಿಸುವ ಮನೋಬಲ ಹಾಗೂ ಆತ್ಮವಿಶ್ವಾಸ ನಿಮಗಿರಲಿ.

-- ಧೂಮಪಾನ ಮಾಡಬೇಕೆಂಬ ಒತ್ತಡವನ್ನು ಇತರೆ ಚಟುವಟಿಕೆಗಳಿಂದ ( ವ್ಯಾಯಾಮ , ಧ್ಯಾನ ) ನಿಭಾಯಿಸಬೇಕು. ನಿಮ್ಮ ಬಾಯಿ ಹಾಗೂ ಹಲ್ಲುಗಳನ್ನು ಸ್ವಚ್ಛವಾಗಿಡಿ.

-- ಅವಶ್ಯವಿದ್ದರೆ ಶ್ವಾಸಕೋಶದ ವೈದ್ಯರು ಅಥವಾ ಮನೋವೈದ್ಯರ ಸಹಾಯವನ್ನು ಪಡೆಯಿರಿ.





ಲೇಖಕರು:
ಡಾ. ಅಜಿತ್ ಈಟಿ

ಶ್ವಾಸಕೋಶ ತಜ್ಙರು
"ಉಸಿರು"- ದಿ ಬ್ರೀಥ್ ಕ್ಲಿನಿಕ್
ಪಿ.ಜೆ ಬಡಾವಣೆ
ದಾವಣಗೆರೆ.
ph : 9900806121
mail id : ajith.eti1@gmail.com



Comments

Popular posts from this blog

ಅಲರ್ಜಿ , ಅಸ್ತಮಾ , ಇನ್ಹೇಲರ್ ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ✍️ಡಾ.ಅಜಿತ್ ಈಟಿ

ಗೊರಕೆ ನಿರ್ಲಕ್ಷಿಸಿದರೆ ಅಪಾಯ !