ಕ್ಷಯರೋಗ ಬಗ್ಗೆ ಡಾ.ಅಜಿತ್ ಈಟಿ ರವರ ಸಂಪೂರ್ಣ ಮಾಹಿತಿ.
✍️ಡಾ. ಅಜಿತ್ ಈಟಿ , ಶ್ವಾಸಕೋಶದ ತಜ್ಞರು, ದಾವಣಗೆರೆ March 24 - ಇಂದು "ವಿಶ್ವ ಕ್ಷಯರೋಗ ದಿನ" . ಮಾರ್ಚ್ 24 1882 ರಂದು ರಾಬರ್ಟ್ ಕಾಕ್ ಎಂಬ ವಿಜ್ಞಾನಿ ಕ್ಷಯರೋಗಕ್ಕೆ (Tuberculosis) ಕಾರಣವಾದ ಟಿ.ಬಿ ಸೂಕ್ಷ್ಮಾಣು ವನ್ನು ಕಂಡುಹಿಡಿದ ದಿನ . "ಮೃತ್ಯುವಿನ ನಾಯಕ"( Captain of death) ಎಂದೇ ಹೆಸರು ಪಡೆದಿರುವ ಈ ರೋಗದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಸೂಕ್ತ ದಿನವಿದು. ಸಾವಿರಾರು ವರ್ಷಗಳ ಇತಿಹಾಸ ಪಡೆದಿರುವ ಕ್ಷಯರೋಗ ( ಟಿ.ಬಿ) , ಇಂದಿನ ಆಧುನಿಕ ಮಾನವ ಕುಲಕ್ಕೂ ಸಹ ಒಂದು ದೊಡ್ಡ ಕಂಟಕವಾಗಿ ಉಳಿದುಕೊಂಡಿದೆ. ಅದರಲ್ಲೂ ಪ್ರಮುಖವಾಗಿ ಭಾರತ ದೇಶ ಕ್ಷಯರೋಗದಿಂದ ಬಾಧಿತವಾದ ರಾಷ್ಟ್ರಗಳಲ್ಲಿ ಅಗ್ರಸ್ಥಾನ ಪಡೆದಿದೆ. ಆದರೆ ಇತ್ತೀಚೆಗೆ ಕರೋನ ವೈರಸ್ ಕಲಿಸಿಕೊಟ್ಟ ಪಾಠದಿಂದ ದೇಶದಲ್ಲಿರುವ ಕ್ಷಯರೋಗದ ಹಾಗೂ ಅನೇಕ ಸಾಂಕ್ರಾಮಿಕ ರೋಗಗಳ ಹೊರೆಯನ್ನ ಸಮರ್ಪಕವಾಗಿ ಕಡಿಮೆಗೊಳಿಸಲು ಅವಕಾಶವಿದೆ. ವಿಶ್ವದ ಶೇಕಡ 25% ರಷ್ಟು ಕ್ಷಯರೋಗಿಗಳನ್ನು ಭಾರತ ಹೊಂದಿದೆ. ಅಂಕಿ ಅಂಶಗಳನ್ನು ಗಮನಿಸಿದರೆ ಪ್ರತಿವರ್ಷ ನಮ್ಮ ದೇಶದಲ್ಲಿ ಲಕ್ಷಾಂತರ ಜನರು ಕ್ಷಯರೋಗದಿಂದ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ. 2018 ರಲ್ಲಿ ಭಾರತದ 26.9 ಲಕ್ಷ ಜನರು ಟಿ.ಬಿ ಪೀಡಿತರಾದರೆ , ಅದರಲ್ಲಿ 4.40 ಲಕ್ಷ ಜನರು ಅಸುನೀಗಿದ್ದಾರೆ . ಏಡ್ಸ್ (HIV) ಹಾಗು ಔಷಧ ನಿರೋಧಕ ಟಿ.ಬಿ (MDR - TB) ಯಿಂದ , ಈ ಸಂಖ್ಯೆ ಹೆಚ್ಚುತ್ತಲೇ ಇ