ಧೂಮಪಾನ ತ್ಯಜಿಸಿ, ಶ್ವಾಸಕೋಶದ ಕ್ಯಾನ್ಸರ್ ದೂರವಿಡಿ. ✍️ ಡಾ.ಅಜಿತ್ ಈಟಿ , ಶ್ವಾಸಕೋಶ ತಜ್ಞರು.
Aug 1st 2020 - ಇಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನ . ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕ್ಯಾನ್ಸರ್ ರೋಗವು ಮಾರಣಾಂತಿಕ ವಾಗಿದ್ದು , ಜಗತ್ತಿನಾದ್ಯಂತ ಸಂಭವಿಸುವ ಸಾವುಗಳಿಗೆ ಪ್ರಮುಖ ಕಾರಣವಾಗಿದೆ . ಮಾನವ ದೇಹದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಗಳ ಪೈಕಿ ಶ್ವಾಸಕೋಶದ ಕ್ಯಾನ್ಸರ್ ಅಗ್ರಸ್ಥಾನ ಪಡೆದಿದ್ದು , ಕ್ಯಾನ್ಸರ್ ನಿಂದ ಆಗುವ ಸಾವುಗಳಿಗೂ ಮುಂಚೂಣಿಯಲ್ಲಿದೆ. ಜಗತ್ತಿನಾದ್ಯಂತ ಸಂಭವಿಸುವ ಪ್ರತಿ 5 ಕ್ಯಾನ್ಸರ್ ಸಾವುಗಳಲ್ಲಿ , 1 ಸಾವು ಶ್ವಾಸಕೋಶದ ಕ್ಯಾನ್ಸರ್ ನಿಂದ ಆಗಿರುತ್ತದೆ. WHO ಪ್ರಕಾರ 2018 ರಲ್ಲಿ ಜಗತ್ತಿನಾದ್ಯಂತ 20.9 ಲಕ್ಷ ರೋಗಿಗಳು ಶ್ವಾಸಕೋಶದ ಕ್ಯಾನ್ಸರ್ ಭಾದಿತರಾಗಿದ್ದು, ಅವರಲ್ಲಿ 17.9 ಲಕ್ಷ ರೋಗಿಗಳು ಸಾವನ್ನಪ್ಪಿದ್ದಾರೆ. ಭಾರತವು ಸಹ ಅತಿ ಹೆಚ್ಚು ಶ್ವಾಸಕೋಶದ ಕ್ಯಾನ್ಸರ್ ಬಾಧಿತ ರಾಷ್ಟ್ರಗಳಲ್ಲಿ ಹೆಸರು ಪಡೆದುಕೊಂಡಿದೆ. ಕಾರಣಗಳೇನು ?? ಶ್ವಾಸಕೋಶದ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾಗಿದ್ದು , ಸಾಮಾನ್ಯವಾಗಿ 50 ವರ್ಷ ಹಾಗೂ ಮೇಲ್ಪಟ್ಟ ವಯೋಮಾನದ ಪುರುಷರಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಶೇಕಡಾ 85- 90 % ರಷ್ಟು ಶ್ವಾಸಕೋಶದ ಕ್ಯಾನ್ಸರ್ ಧೂಮಪಾನದಿಂದ ಕಾಣಿಸಿಕೊಳ್ಳುತ್ತದೆ. ಅನುವಂಶಿಯತೆ , ವಾಯುಮಾಲಿನ್ಯ , ವೃತ್ತಿ ಸಂಬಂಧದ ಮಾಲಿನ್ಯ ( ಸಿಲಿಕಾ, ಅಸ್ಬೇಷ್ಟೋಸ್, ಆರ್ಸೆನಿಕ್, ಯುರೇನಿಯಂ ) , ಸಿ.ಒ.ಪಿ.ಡಿ ಕಾಯಿಲೆ , ಆಹಾರ ಪದ್ಧತಿ ಹ...