Posts

Showing posts from September, 2020

ಶ್ವಾಸಕೋಶದ ಮಹತ್ವ ತಿಳಿಸಿಕೊಟ್ಟ ಕರೋನ

Image
. ಇಂದು ವಿಶ್ವ ಶ್ವಾಸಕೋಶ ದಿನ. ಮಾನವ ದೇಹದ 5 ಪ್ರಮುಖ ಅಂಗಾಂಗಗಳಲ್ಲಿ ಒಂದಾದ ಶ್ವಾಸಕೋಶ , ದೇಹದ ಸದೃಢ ಆರೋಗ್ಯ ಕಾಪಾಡುವಲ್ಲಿ ಪ್ರಧಾನವಾದ ಪಾತ್ರ ವಹಿಸುತ್ತದೆ. ಎದೆಯ ಭಾಗದಲ್ಲಿ ಹೃದಯದ ಅಕ್ಕ-ಪಕ್ಕ 2 ಶ್ವಾಸಕೋಶಗಳು ಕುಳಿತಿವೆ. ಇವುಗಳ ಪ್ರಮುಖ ಕೆಲಸ - ನಾವು ಸೇವಿಸುವ ಗಾಳಿಯಲ್ಲಿರುವ ಆಮ್ಲಜನಕವನ್ನು ರಕ್ತದ ಮೂಲಕ ದೇಹದ ಪ್ರತಿ ಜೀವಕೋಶಗಳಿಗೂ ಸರಬರಾಜು ಮಾಡುವುದು ಹಾಗೂ ಕೋಶಗಳಿಂದ ಬಿಡಲಾದ ಇಂಗಾಲದ ಡೈಯಾಕ್ಸೈಡ್ ಹೊರಹಾಕುವುದಾಗಿದೆ. ದೇಹದ ನೀರಿನ ಹಾಗೂ ಉಷ್ಣಾಂಶ ಸಮತೋಲನ, ಸೂಕ್ಷ್ಮ ಕ್ರಿಮಿಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಕಾಪಾಡುವಲ್ಲಿಯೂ ಸಹ ಶ್ವಾಸಕೋಶಗಳು ಮುಖ್ಯ ಪಾತ್ರ ವಹಿಸುತ್ತವೆ. ಶ್ವಾಸಕೋಶದ ತೊಂದರೆ ಹಾಗೂ ರೋಗಗಳು ಶತ ಶತಮಾನಗಳಿಂದಲೂ ಮಾನವನನ್ನು ಭಾದಿಸುತ್ತಾ ಬಂದಿದೆ. ವಿಶ್ವದಾದ್ಯಂತ ಸಂಭವಿಸುತ್ತಿರುವ ಸಾವುಗಳಿಗೆ ಕಾರಣಗಳನ್ನು ನೋಡಿದಾಗ, ಮೊದಲನೆಯ ಸ್ಥಾನ ಹೃದಯ ರೋಗಗಳು ಪಡೆದುಕೊಂಡರೆ , ಎರಡನೆಯ ಸ್ಥಾನ ಶ್ವಾಸಕೋಶದ ಕಾಯಿಲೆಗಳಾಗಿವೆ. ಉಲ್ಬಣ ಗೊಳ್ಳುತ್ತಿರುವ ವಾಯುಮಾಲಿನ್ಯ, ಹೆಚ್ಚುತ್ತಿರುವ ಧೂಮಪಾನ ಸೇವನೆ ಹಾಗೂ ಅನಾರೋಗ್ಯಕರ ಜೀವನ ಶೈಲಿಯಿಂದಾಗಿ ಕಳೆದ ದಶಕದಲ್ಲಿ ಶ್ವಾಸಕೋಶ ಕಾಯಿಲೆಗಳು ಗಣನೀಯವಾಗಿ ಏರಿಕೆಯಾಗಿದೆ. ಶ್ವಾಸಕೋಶ ವನ್ನು ಬಾಧಿಸುವ ಪ್ರಮುಖ ಕಾಯಿಲೆಗಳ ಬಗ್ಗೆ ತಿಳಿದುಕೊಳ್ಳೋಣ. ಅಸ್ತಮಾ , ದಮ್ಮು ಕಾಯಿಲೆ ( ಸಿ.ಓ.ಪಿ.ಡಿ ) , ಪಲ್ಮನರಿ ಫೈಬ್ರೋಸಿಸ್ , ಶ್ವಾಸಕೋಶದ ಕ್ಯಾನ್ಸರ್ - ಇವು ಹೇರಳವಾಗಿ...